ರಾಜ್ಯದಲ್ಲಿ ಕಠಿಣ ಕಾನೂನು ಜಾರಿ ಮಾಡಿದ ಸರ್ಕಾರ | Health | Celebrity With Corona | Oneindia Kannada

2020-03-12 1

ಹಾಲಿವುಡ್ ನಟ ಟಾಮ್ ಹ್ಯಾಂಕ್ಸ್ ಅವರಿಗೆ ಸೋಂಕು ತಗುಲಿರುವುದನ್ನು ಖಚಿತವಾಗುತ್ತಿದ್ದಂತೆ ಇವರ ಪತ್ನಿ, ನಟಿ ರಿಟಾ ವಿಲ್ಸನ್ ಅವರಿಗೂ ಕೊರೊನಾ ತಗುಲಿರುವುದು ದೃಢಪಟ್ಟಿದೆ. ನಿನ್ನೆಯಷ್ಟೇ ಬ್ರಿಟನ್‍ನ ಆರೋಗ್ಯ ಸಚಿವೆಗೆ ಕೊರೊನಾ ತಗುಲಿರುವುದು ವರದಿಯಾಗಿತ್ತು. ಇದೀಗ ಹಾಲಿವುಡ್ ನಟ ಹಾಗೂ ಪತ್ನಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ವಿಶ್ವಾದ್ಯಂತ ಸೋಂಕು ಆವರಿಸುತ್ತಿರುವ ಕಾರಣ ವಿಶ್ವ ಆರೋಗ್ಯ ಸಂಸ್ಥೆ ಇದನ್ನು ವಿಶ್ವ ಸಾಂಕ್ರಾಮಿಕ ರೋಗ ಎಂದು ಘೋಷಣೆ ಮಾಡಿದೆ.

Actor Tom Hanks says he and his wife, actress Rita Wilson, have been diagnosed with coronavirus.